ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ ಭಜರಂಗಿ-2

ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ ಭಜರಂಗಿ-2

ಶಿವರಾಜ್ ಕುಮಾರ್ ಅಭಿನಯದ “ಭಜರಂಗಿ-೨′ ಚಿತ್ರ ೨೯ಕ್ಕೆ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. “ಭಜರಂಗಿ-೨′ ಚಿತ್ರ ಔಟ್ ಅಂಡ್ ಔಟ್ ಹಾಗೂ ಫ್ಯಾಂಟಸಿ ಅಂಶಗಳಿAದ ಕೂಡಿರುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂಲಕ ಮತ್ತೂಂದು ಬಿಗ್ ರಿಲೀಸ್‌ಗೆ “ಭಜರಂಗಿ-೨′ ಸಾಕ್ಷಿಯಾಗಲಿದೆ. ಇನ್ನು ಚಿತ್ರದ ಟ್ರೇಲರ್‌ನಲ್ಲಿ ಅದ್ಧೂರಿ ಸೆಟ್‌ಗಳು, ಭಯ ಹುಟ್ಟಿಸುವ ಭಯಾನಕ ಪಾತ್ರಗಳು, ಬೆಂಕಿಯುಗುಳುವ ಕಂಗಳನ್ನು ಕಂಡು ಸಿನಿಪ್ರೇಮಿಗಳ ಕುತೂಹಲ ಹೆಚ್ಚಿದೆ. ಡಾ. ಶಿವರಾಜ್ ಕುಮಾರ್, “ಭಜರಂಗಿ’ ಲೋಕಿ, ಭಾವನಾ, ಶ್ರುತಿ…ನಟಿಸಿದ್ದು, ಎ.ಹರ್ಷ ನಿರ್ದೇಶನದ ಈ ಚಿತ್ರವನ್ನು “ಜಯಣ್ಣ ಫಿಲಂಸ್’ ನಿರ್ಮಿಸಿದೆ

news desk

times of bengaluru