ಪ್ರಜ್ವಲ್-ರಾಗಿಣಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ
ಸ್ಯಾಂಡಲ್ವುಡ್ ನಟ ಪ್ರಜ್ವಲ್ ದೇವರಾಜ್ ರಾಗಿಣಿ ಚಂದ್ರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ೬ ವರ್ಷ ಕಳೆದಿದ್ದು, ಆರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ಖುಷಿಯ ಪ್ರಯುಕ್ತ ಇಬ್ಬರೂ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ವೆಡ್ಡಿಂಗ್ ಆನಿವರ್ಸರಿ ಪ್ರಯುಕ್ತ ಆಪ್ತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಈ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.ಪ್ರಜ್ವಲ್ ದೇವರಾಜ್ ಸದ್ಯ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದು,
ಜೆಂಟಲ್ಮ್ಯಾನ್ ಸಿನಿಮಾ ಜನಮೆಚ್ಚುಗೆ ಪಡೆದುಕೊಂಡಿತು. ಇನ್ಸ್ಪೆಕ್ಟರ್ ವಿಕ್ರಂ ಬಿಡುಗಡೆ ಆಯಿತು. ಈಗ ಅವರು ‘ವೀರಂ’, ‘ಮಾಫಿಯಾ’, ‘ಅರ್ಜುನ್ ಗೌಡ’ ಮುಂತಾದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
news desk
times of bengaluru