ಅಪ್ಪು ಸ್ಥಾನವನ್ನ ಯಾರಿಂದಲೂ ತುಂಬಲು ಸಾಧ್ಯವಿಲ್ಲ
ಪುನೀತ್ ರಾಜ್ಕುಮಾರ್ ಸ್ಥಾನವನ್ನ ಯಾರಿಂದಲೂ ತುಂಬಲು ಸಾಧ್ಯವಿಲ್ಲ, ಆ ಸ್ಥಾನ ಯಾವತ್ತೂ ಶೂನ್ಯತೆಯಿಂದ ಕೂಡಿರುತ್ತೆ ಎಂದು ನಟ ಅಭಿಪ್ರಾಯಪಟ್ಟರು. ೧೦೦ ಸಿನಿಮಾ ಮಾಧ್ಯಮಗೋಷ್ಠಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೋಟೋಗೆ ನಮನ ಸಲ್ಲಿಸಿ ರಮೇಶ್ ನಟ ಅರವಿಂದ್ ಮಾತನಾಡಿದರು. ಸಂಗೀತ ನಿರ್ದೇಶಕ ಗುರು ಕಿರಣ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಹಿರಿಯ ನಟ ರಮೇಶ್ ಅರವಿಂದ್ ಪುನೀತ್ ರಾಜ್ಕುಮಾರ್ ಅವರೊಂದಿಗೆ ಸಾಕಷ್ಟು ವಿಚಾರಗಳನ್ನ ಮಾತನಾಡಿದ್ದರು. ಆ ಕ್ಷಣವನ್ನ ನೆನೆದು ರಮೇಶ್ ಅರವಿಂದ್ ಭಾವುಕರಾದರು. ಸತತ ಎರಡು ಗಂಟೆಗಳ ಕಾಲ ಪುನೀತ್ ರಾಜ್ಕುಮಾರ್ ಅವರ ಜತೆ ಮಾತನಾಡಿದ್ದ ರಮೇಶ್ ಅರವಿಂದ್, ಸಿನಿಮಾ, ಕ್ರಿಕೆಟ್ ಹಾಗೇ ಬೇರೆ ಬೇರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದರು ಎಂದು ಹೇಳಿದರು.
news desk
times of bengaluru