‘ಮದಗಜ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ

‘ಮದಗಜ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮಹೇಶ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಮದಗಜ’ ಸಿನಿಮಾದ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗ ಮಾತ್ರಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟೈಟಲ್, ಅದ್ಧೂರಿ ಮೇಕಿಂಗ್‌ನಿAದಲೇ ಭಾರಿ ಸದ್ದು ಮಾಡುತ್ತಿರುವ ಮದಗಜ ಸಿನಿಮಾದ ಟೈಟಲ್ ಸಾಂಗ್‌ನ್ನು ಚಿತ್ರತಂಡ ಅನಾವರಣ ಮಾಡಿದೆ.ಇದೀಗ ಸಿನಿಮಾದ ಟೈಟಲ್ ಹಾಡನ್ನ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಮದಗಜ ಚಿತ್ರತಂಡ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಈ ವೇಳೆ ಭಾವುಕರಾದ ಶ್ರೀಮುರಳಿ,’ ಮದಗಜ’ ಟೈಟಲ್ ಸಾಂಗ್ ಅಪ್ಪುಮಾಮಗೆ ಅರ್ಪಣೆ ಅಂದರು. ಶ್ರೀಮುರಳಿಗೆ ನಟಿ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಕನ್ನಡ ,ತೆಲುಗು, ತಮಿಳು ಭಾಷೆಯಲ್ಲಿ ‘ಮದಗಜ’ ಸಿನಿಮಾ ಬಿಡುಗಡೆ ಆಗಲಿದೆ.

news desk

times of bengaluru