ಶರ್ಟ್, ಪ್ಯಾಂಟ್ ಕದ್ದಿದ್ದ ಆರೋಪಿಗಳ ಬಂಧನ
ದೊಡ್ಡಬಳ್ಳಾಪುರ: ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ೩೮೦ ಶರ್ಟ್, ೯೦ ಪ್ಯಾಂಟ್ ಕದ್ದಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ಅಪೆರಲ್ ಪಾರ್ಕ್ನಲ್ಲಿನ ಬಾಂಬೆ ರೆಯಾನ್ ಫ್ಯಾಕ್ಟರಿಯಲ್ಲಿ ಬಟ್ಟೆ ಕಳ್ಳತನವಾಗಿತ್ತು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಇದೀಗ ಅನಿಲ್ ಹಾಗೂ ಮಹೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಾವು ಬಟ್ಟೆ ಕದ್ದಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳವು ಮಾಡಿದ ಬಟ್ಟೆಗಳನ್ನು ಸ್ನೇಹಿತರ ಮೂಲಕ ಮಾರಾಟ ಮಾಡಿಸಿ ಹಣ ಗಳಿಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
news desk
times of bengaluru