ಗಾರ್ಮೆಂಟ್ಸ್, ಟೆಕ್ಸ್ಟೈಲ್ ಮೇಲಿನ ಜಿಎಸ್‌ಟಿ ದರ ಏರಿಕೆ

ಗಾರ್ಮೆಂಟ್ಸ್, ಟೆಕ್ಸ್ಟೈಲ್ ಮೇಲಿನ ಜಿಎಸ್‌ಟಿ ದರ ಏರಿಕೆ

ಗಾರ್ಮೆಂಟ್ಸ್, ಟೆಕ್ಸ್ಟೈಲ್ ಮೇಲಿನ ಜಿಎಸ್‌ಟಿ ದರ ಇಳಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಏರಿಸಿದೆ. ಉಡುಪುಗಳು, ಜವಳಿಗಳ ಮೇಲೆ ಜಿಎಸ್‌ಟಿ ದರವನ್ನು ಶೇ.೫ರಿಂದ ೧೨ಕ್ಕೇರಿಸಿದೆ. ೨೦೨೨ ಜನವರಿ ೧ರಿಂದಲೇ ಜಾರಿಗೆ ಬರುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇದು ಗ್ರಾಹಕರಿಗೂ ಶೇ.೭ರಷ್ಟು ಹೊರೆ ಆಗಲಿದೆ. ರೈತರ ಕಾಯ್ದೆ ವಿಚಾರದಲ್ಲಿ ಸರ್ಕಾರ ಯೂಟರ್ನ್ ಪಡೆದಂತೆ ಗಾರ್ಮೆಂಟ್ಸ್ ವಿಚಾರದಲ್ಲೂ ಈ ನಿರ್ಧಾರ ಹಿಂಪಡೆಯಬೇಕೆAದು ಕರ್ನಾಟಕ ಗಾರ್ಮೆಂಟ್ ಅಸೋಸಿಯೇಷನ್ ಬೆಂಗಳೂರಿನ ಮಾಜಿ ಅಧ್ಯಕ್ಷ ಸಜ್ಜನ್ ರಾಜ್ ಮೆಹ್ತಾ ತಿಳಿಸಿದ್ದಾರೆ. ಈಗಾಗಲೇ ಸಾರಿಗೆ ವೆಚ್ಚ, ಹತ್ತಿ ಬೆಲೆ ೪೦%ನಷ್ಟು ಏರಿಕೆ ಆಗಿದೆ. ಕೋವಿಡ್ ಸಮಯದಲ್ಲೂ ಸಾಕಷ್ಟು ಸಂಕಷ್ಟ ಉಂಟಾಗಿದೆ. ಜಿಎಸ್‌ಟಿ ಕಡಿಮೆ ಮಾಡದಿದ್ದರೆ ಹೋರಾಟ ಒಂದೇ ನಮಗಿರುವ ದಾರಿ ಎಂದರು. ಜಿಎಸ್‌ಟಿ ಏರಿಕೆಯಿಂದ ಬಟ್ಟೆ ಉದ್ಯಮ, ಮಾರುಕಟ್ಟೆ, ಉದ್ಯೋಗಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀಳಲಿದೆ. ಹೀಗಾಗಿ, ಜಿಎಸ್‌ಟಿ ಏರಿಕೆ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಮನವಿ ಮಾಡಿದ್ದಾರೆ.

news desk

times of bengaluru