ಭಾರೀ ಮಳೆಯಿಂದ ಜನರ ಪರದಾಟ

ಭಾರೀ ಮಳೆಯಿಂದ ಜನರ ಪರದಾಟ

ಯಲಹಂಕ : ಭಾರಿ ಮಳೆಯಿಂದ ಯಲಹಂಕದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಯಲಹಂಕ ನಗರದಲ್ಲಿ ಭಾರಿ ಮಳೆಯಿಂದ ಯಲಹಂಕ ರೈಲ್ವೆ ಅಂಡರ್ಪಾಸ್ ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರ, ಸುರಭಿಲೇಔಟ್, ಸಪ್ತಗಿರಿ ಲೇಔಟ್ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ವರುಣನ ಆರ್ಭಟಕ್ಕೆ ಏರ್‌ಪೋರ್ಟ್ ರಸ್ತೆ, ಕೋಗಿಲು ಕ್ರಾಸ್, ಪೊಲೀಸ್ ಠಾಣೆ ವೃತ್ತಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಬೈಕ್ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.

news desk

times of bengaluru