ಜನರ ಕಷ್ಟಕ್ಕಿಂತ ಚುನಾವಣಾ ಪ್ರಚಾರವೇ ಮುಖ್ಯ

ಜನರ ಕಷ್ಟಕ್ಕಿಂತ ಚುನಾವಣಾ ಪ್ರಚಾರವೇ ಮುಖ್ಯ

ಬೆಂಗಳೂರು: ಸಿಎಂ ಕಾಟಾಚಾರಕ್ಕೆ ಮಳೆಯಿಂದಾದ ಹಾನಿ ಪ್ರದೇಶಗಳಿಗೆ ಹೋಗಿ ಬರ್ತಿದ್ದಾರೆ. ಜನರ ಕಷ್ಟಕ್ಕಿಂತ ಅವರಿಗೆ ಚುನಾವಣಾ ಪ್ರಚಾರವೇ ಮುಖ್ಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಹಿಂಗಾರು ಮಳೆ ಜಾಸ್ತಿ ಆಗಿದೆ. ಪರಿಣಾಮ ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಆಗಿದೆ. ಕೃಷಿ ಇಲಾಖೆಯವರೇ ಈ ಮಾಹಿತಿ ಹೇಳ್ತಿರುವುದು. ರಾಗಿ, ಜೋಳ, ಕಾಫಿ, ಶೇಂಗಾ, ಭತ್ತ ಹಾನಿಯಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು. ಮನೆಗಳು ಬಿದ್ದಿವೆ, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಆದ್ರೆ ಸರ್ಕಾರ ನಷ್ಟದ ಬಗ್ಗೆ ಒಂದು ರಿಪೋರ್ಟ್ ಪಡೆದಿಲ್ಲ. ಸಿಎಂ ಜನಸ್ವರಾಜ್ ಯಾತ್ರೆ ಮಾಡ್ತಿದ್ದಾರೆ. ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಇಲ್ಲ ಎಂದರು.

news desk

times of bengaluru