ಅಂಬರೀಷ್ ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ
ಬೆಂಗಳೂರು: ಇಂದು ಅಂಬರೀಶ್ರವರ ಮೂರನೇ ಪುಣ್ಯ ಸ್ಮರಣೆ ಆದರೆ ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ. ಅವರು ಜೀವನದಲ್ಲಿ ನಡೆದುಕೊಂಡು ಬಂದಿರುವ ಹಾದಿ ನಮಗೆ ಶಕ್ತಿ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಅಂಬರೀಶ್ ಪುಣ್ಯಸ್ಮರಣೆ ವೇಳೆ ಮಾತನಾಡಿ, ಅಂಬಿ ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕಾಗುತ್ತದೆ, ಅವರೊಂದಿಗೆ ಕಳೆದ ಸಮಯ ನೆನಪಿಸಿಕೊಂಡ್ರೆ ಆ ಧೈರ್ಯ ಬರುತ್ತೆ ಎಂದರು. ಡಾ.ಅಂಬರೀಶ್ ಚಾರಿಟಬಲ್ ಟ್ರಸ್ಟ್ ಮಾಡಿದ್ದೇವೆ. ಅಂಬಿ ಕನಸು ಈ ಟ್ರಸ್ಟ್ ಮೂಲಕ ಮುಂದುವರೆಸುತ್ತಿದ್ದೇವೆ ಎಂದು ಹೇಳಿದರು. ಈ ಫೌಂಡೇಶನ್ ಮೂಲಕ ಅಂಬರೀಶ್ ಮಾಡುವ ಕೆಲಸಗಳನ್ನು ಮುಂದುವರೆಸಿಕೊAಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಅಂಬರೀಶ್ ಯಾವುದೇ ಸ್ಥಾನ, ಪ್ರಶಸ್ತಿಯನ್ನು ಲಾಬಿ ಮಾಡಿ ಪಡೆದುಕೊಂಡಿಲ್ಲ ಎಂದರು.
news desk
times of bengaluru