ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದು ಪರಾರಿ

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದು ಪರಾರಿ

ಬೆಂಗಳೂರು: ಕಾರು ಖರೀದಿಸುವ ಸೋಗಿನಲ್ಲಿ ಬಂದು ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಡೊಡ್ಡಬಳ್ಳಾಪುರ ನಿವಾಸಿ ಶ್ರೀನಿವಾಸ್ ಬಂಧಿತ ಆರೋಪಿ. ಇದೀಗ ಕಂಬಿ ಹಿಂದೆ ನಿಂತಿರುವ ಈತನ ಟೆಸ್ಟ್ ಡ್ರೈವ್ ಕಳ್ಳಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.ಕೇಸ್‌ಗೆ ಸಂಬAಧಿಸಿದAತೆ ಆರೋಪಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಈತ ಮಾರಾಟಕ್ಕಿಟ್ಟಿದ್ದ ಕಾರುಗಳನ್ನ ಖರೀದಿಸುವ ನೆಪದಲ್ಲಿ ಬಂದು ಟೆಸ್ಟ್ ಡ್ರೈವ್‌ಗೆಂದು ಕಾರುಗಳನ್ನ ತೆಗೆದುಕೊಂಡು ಹೋಗುತ್ತಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಂಚನೆ ಮಾಡುತ್ತಿದ್ದ. ಬಂಧಿತನ ವಿಚಾರಣೆ ವೇಳೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ೩೫ ಲಕ್ಷ ರೂ. ಮೌಲ್ಯದ ೭ ಕಾರುಗಳನ್ನ ಟೆಸ್ಟ್ ಡ್ರೈವ್ ನೆಪದಲ್ಲಿ ಕೊಂಡೊಯ್ದಿರುವುದು ಪತ್ತೆಯಾಗಿದೆ. ಸದ್ಯ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

news desk

times of bengaluru