ಶಕ್ತಿಧಾಮಕ್ಕೆ ಭೇಟಿ ನೀಡಿದ ಡಾ.ಶಿವರಾಜ್‌ಕುಮಾರ್

ಶಕ್ತಿಧಾಮಕ್ಕೆ ಭೇಟಿ ನೀಡಿದ ಡಾ.ಶಿವರಾಜ್‌ಕುಮಾರ್

ನಟ ಶಿವರಾಜ್ ಕುಮಾರ್ ದಂಪತಿ ಇಂದು ಶಕ್ತಿಧಾಮಕ್ಕೆ ಭೇಟಿ ನೀಡಿದರು. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಇದೇ ಮೊದಲ ಬಾರಿಗೆ ಶಕ್ತಿಧಾಮಕ್ಕೆ ಭೇಟಿ ನೀಡಿರುವ ಶಿವರಾಜ್ ಕುಮಾರ್, ಶಕ್ತಿಧಾಮದ ಟ್ರಸ್ಟಿಗಳಾದ ಕೆಂಪಯ್ಯ, ಜಯದೇವ್, ಸುಮನ ಹಾಗೂ ಮಕ್ಕಳೊಂದಿಗೆ ಚರ್ಚಿಸಿದರು.ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅಲ್ಲಿಗೆ ಬಂದಾಗಲೆಲ್ಲ ಪುನೀತ್ ರಾಜ್ ಕುಮಾರ್ ತಮ್ಮೊಂದಿಗೆ ಹೇಗೆ ಬೆರೆಯುತ್ತಿದ್ದರು. ಯಾವುದೇ ಅಹಂ ಇಲ್ಲದೆ ತಮ್ಮೊಟ್ಟಿಗೆ ಕೂತು ಊಟ ಮಾಡುತ್ತಿದ್ದರು ಎಂದು ಮಕ್ಕಳು ಶಿವಣ್ಣ, ಗೀತಾ ಬಳಿ ಅಳಲು ತೋಡಿಕೊಂಡರು. ಆಗ ಶಿವರಾಜ್ ಕುಮಾರ್ ಪುನೀತ್ ನಿಮ್ಮೊಂದಿಗೆ ಹೀಗೆ ನಡೆದುಕೊಳ್ಳುತ್ತಿದ್ದನೋ ನಾವು ಕೂಡ ನಿಮ್ಮ ಜೊತೆ ಇರುತ್ತೇವೆಂದು ಭರವಸೆ ನೀಡಿದರು.

news desk

times of bengaluru