ಟಿಸಿ ಬದಲಾಯಿಸಲು ಲಂಚ ಪಡೆದರೆ ಸಸ್ಪೆಂಡ್
ಬೆಂಗಳೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ತಿಗೆ ಬಂದ ೨೪ ಗಂಟೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಯೋಜನೆಯನ್ನು ರಾಜ್ಯದಲ್ಲಿ ಡಿಸೆಂಬರ್ ೧೦ ರಿಂದ ಜಾರಿಗೆ ಮಾಡಲಾಗುತ್ತಿದೆಇನ್ನು ಮುಂದೆ ಟಿಸಿ ಬದಲಾವಣೆಗಾಗಿ ರೈತರು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಇದನ್ನು ತಪ್ಪಿಸಿ ೨೪ ಗಂಟೆಯಲ್ಲಿ ಹಾಳಾದ ಟಿಸಿಯನ್ನು ಬದಲಾವಣೆ ಮಾಡಿಕೊಡಲಾಗುವುದು. ಇದಕ್ಕಾಗಿ ರಾಜ್ಯದ ೧೬೦ ಸ್ಥಳಗಳಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್, ಟಿಸಿ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂಧನ ಇಲಾಖೆ ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಇನ್ನು ರೈತರು ಟ್ರಾನ್ಸ್ ಫಾರ್ಮರ್ ಸಾಗಿಸಲು ವಾಹನ ತರಬೇಕಿಲ್ಲ. ವಿದ್ಯುತ್ ಉಪ ಕೇಂದ್ರಗಳಲ್ಲಿಯೇ ವಾಹನಗಳಿರಲಿದ್ದು, ಅವುಗಳ ಮೂಲಕವೇ ಟಿಸಿ ಸಾಗಿಸಲಾಗುತ್ತದೆ. ಟಿಸಿ ಬದಲಾಯಿಸಲು ರೈತರಿಂದ ಲಂಚ ಪಡೆದರೆ ಸಂಬAಧಿಸಿದ ಇಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.ಇನ್ನು ಮೂರರಿಂದ ನಾಲ್ಕು ಲಕ್ಷ ರೈತರ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
news desk
times of bengaluru