ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಮ್ಯಾ
ಸ್ಯಾಂಡಲ್ವುಡ್ ನಟಿ ರಮ್ಯಾ ೩೯ನೇ ವರ್ಷಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಅಭಿ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ರಮ್ಯಾ ಎಂಟ್ರಿಕೊಟ್ಟರು. . ಸದ್ಯ ನಟನೆಯಿಂದ ದೂರ ಉಳಿದಿರುವ ರಮ್ಯಾ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸದಾ ಆಕ್ಟಿವ್ ಆಗಿದ್ದಾರೆ. ಚಿತ್ರರಂಗದಿAದ ದೂರ ಉಳಿದು ಬಹಳ ವರ್ಷಗಳೇ ಕಳೆದಿದ್ದರೂ ಸ್ಯಾಂಡಲ್ ವುಡ್ ಕ್ವೀನ್ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ರಮ್ಯಾ, ಎಕ್ಸ್ಕ್ಯೂಸ್ ಮಿ, ಆಕಾಶ್, ಅರಸು, ರಂಗ ಎಸ್ಎಸ್ಎಲ್ಸಿ.. ಹೀಗೆ ಹಲವಾರು? ಸಿನಿಮಾಗಳ ಮೂಲಕ ಮೋಹಕ ತಾರೆ ಎಂದು ಕರೆಯಿಸಿಕೊಂಡರು. ರಮ್ಯಾ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಗಣೇಶ್, ಯಶ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡರು. ಇದರ ಜೊತೆಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ
news desk
times of bengaluru