ಆರ್ ಆರ್ ಆರ್ ಚಿತ್ರದಲ್ಲಿ ಅರುಣ್ ಸಾಗರ್

ಆರ್ ಆರ್ ಆರ್ ಚಿತ್ರದಲ್ಲಿ ಅರುಣ್ ಸಾಗರ್

ರಾಜ್ ಮೌಳಿಯ ಆರ್ ಆರ್ ಆರ್ ಸಿನಿಮಾದಲ್ಲಿ ಕನ್ನಡದ ಒಬ್ಬ ನಟ ಅಭಿನಯಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಕನ್ನಡದ ನಟ ಅರುಣ್ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ರಾಜ್ ಮೌಳಿ ಆಕ್ಷನ್ ಕಟ್ ಹೇಳಿರುವ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಈ ಚಿತ್ರದಲ್ಲಿ ಜೂ. ಎನ್ ಟಿ ಆರ್ ಮತ್ತು ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಬಾಲಿವುಡ್ ಸೇರಿದಂತೆ ಹಲವು ಭಾಷೆಯ ನಟ-ನಟಿಯರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಆದ್ರೆ ಕನ್ನಡದಿಂದ ಯಾರೂ ಈ ಸಿನಿಮಾಲ್ಲಿ ನಟಿಸಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿ ಇತ್ತು. ಆದ್ರೆ ಇದೀಗ ಒಂದು ಮಾಹಿತಿ ಹರಿದಾಡುತ್ತಿದ್ದು, ಅರುಣ್ ನಟಿಸುತ್ತಿದ್ದಾರೆ ಎಂದು ಸುದ್ದಿ ಬಂದಿದೆ.

news desk

times of bengaluru