ಸಾಕ್ಷ್ಯಾಧಾರ ಕೊರತೆಯಿಂದ ಕೇಸ್ ಕ್ಲೋಸ್
ಬೆಂಗಳೂರು: ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಮೀಟೂ ಕೇಸ್ ಅಂತ್ಯ ಕಂಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಹಾಕಿ, ಕೇಸ್ ಕ್ಲೋಸ್ ಮಾಡಿದ್ದಾರೆ. ಇದರಿಂದಾಗಿ ನಟಿ ಶೃತಿ ಹರಿಹರನ್ ಗೆ ಹಿನ್ನಡೆಯಾಗಿದೆ. ಧ್ರುವ ಸರ್ಜಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಸೊಳ್ಳೆ, ಕ್ರಿಮಿ, ಕೀಟ ಅಂತೆಲ್ಲಾ ಬರೆದು ಧರ್ಮೋ ರಕ್ಷತೀ ರಕ್ಷಿತಃ ಎಂದು ಕ್ಯಾಪ್ಶಬ್ ಕೊಟ್ಟಿದ್ದಾರೆ. ಜೊತೆಗೆ ಮೇಘನಾ ರಾಜ್ ಕೂಡ ಸ್ಟೋರಿಯಲ್ಲಿ ಜಂಟಲ್ ಮ್ಯಾನ್ ಈಸ್ ಆಲ್ವೇಸ್ ಅಂತ ಬರೆದು ಅರ್ಜುನ್ ಸರ್ಜಾ ಅವರನ್ನ ಟ್ಯಾಗ್ ಮಾಡಿದ್ದಾರೆ.೨೦೧೫ರಲ್ಲಿ ನಡೆದ ವಿಸ್ಮಯ ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶೃತಿ ಹರಿಹರನ್ ೨೦೧೮ರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
news desk
times of bengaluru