ರಸ್ತೆಗುಂಡಿಗಳ ಸುತ್ತ ರಂಗೋಲಿ ಹಾಕಿ ಪೂಜೆ

ರಸ್ತೆಗುಂಡಿಗಳ ಸುತ್ತ ರಂಗೋಲಿ ಹಾಕಿ ಪೂಜೆ

ಬೆಂಗಳೂರು : ರಸ್ತೆ ಗುಂಡಿಗಳನ್ನು ಮುಚ್ಚಿಸದ ಬಿಬಿಎಂಪಿಯ ವಿರುದ್ಧ ನಗರದಲ್ಲಿ ಜನರು ರಸ್ತೆಗುಂಡಿಗಳ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಮಾಡಿ ಜನರು ಪೂಜೆ ಸಲ್ಲಿಸಿ ಪ್ರತಿಭಟಿಸಿದರು.
ಗುಂಡಿದೇವರಿಗೆ ಹೋಮ ಮಾಡುವ ಮೂಲಕ ವಾಹನ ಸವಾರರ ಹಿತಕ್ಕಾಗಿ ಸಾರ್ವಜನಿಕರು ಬೇಡಿಕೊಂಡರು. ರಸ್ತೆ ಗುಂಡಿ ಮುಚ್ಚದಿದ್ದರೆ ಪಾಲಿಕೆ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.ರಸ್ತೆಗಳ ದುರಸ್ಥಿಗೆ ಕಳೆದ ೫ ವರ್ಷಗಳಲ್ಲಿ ಬರೋಬ್ಬರಿ ೨೦,೦೦೦ ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಆದರೆ, ರಸ್ತೆಗಳು ಮಾತ್ರ ಬಾಯ್ಬಿಟ್ಟಿವೆ ಎಂದು ಸಾರ್ವಜನಿಕರು ಕಿಡಿಕಾರಿದರು.

news desk

times of bengaluru