ಮೆಹೆಂದಿ ಶಾಸ್ತ್ರದಲ್ಲಿ ಮಿಂಚಿದ ಕಾವ್ಯಾ ಗೌಡ
ಕಿರುತೆರೆ ನಟಿ ಕಾವ್ಯಾಗೌಡ ತಮ್ಮ ಮದುವೆ ಸಂಭ್ರಮದಲ್ಲಿದ್ದು, ಈಗಾಗಲೇ ಅದ್ದೂರಿ ಮೆಹಂದಿ ಶಾಸ್ತ್ರ ಕೂಡ ನೆರವೇರಿದೆ. ನಾಲ್ಕು ದಿನದ ಮದುವೆಯ ಕಾರ್ಯಕ್ರಮವು ಅದ್ಧೂರಿಯಾಗಿಯೇ ನಡೆಯುತ್ತಿದೆ.. ಕಾವ್ಯ ಗೌಡ ಮೆಹಂದಿ ಕಾರ್ಯಕ್ರಮದಲ್ಲಿ ತಮ್ಮ ಭಾವಿ ಪತಿಯ ಜೊತೆಗೆ ಇರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ನವ ಜೋಡಿಗಳಿಬ್ಬರೂ ಒಂದೇ ಬಣ್ಣ ಹಾಗೂ ಡಿಸೈನ್ ನ ಉಡುಪು ಧರಿಸಿದ್ದು, ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ..ಕೈ ತುಂಬಾ ಅಂದವಾದ ಮೆಹಂದಿ ಹಾಕಿಕೊಂಡು ಸಂಗೀತ ಕಾರ್ಯಕ್ರಮದಲ್ಲಿ ಕಾವ್ಯ, ಸೋಮಶೇಖರ್ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಸ್ನೇಹಿತರು, ಸಂಬAಧಿಕರು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ.
news desk
times of bengaluru