ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆ

ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಲೆ

ಬೆಂ.ಗ್ರಾಮಾಂತರ : ಅವಾಚ್ಯ ಪದಗಳಿಂದ ನಿಂದಿಸಿದ ಎಂದು ಕುಡಿದ ಅಮಲಿನಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆ.ಸತ್ಯವಾರ ಗ್ರಾಮದಲ್ಲಿ ನಡೆದಿದೆ.

ಎಣ್ಣೆ ಪಾರ್ಟಿ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಸ್ನೇಹಿತರೇ ಸೇರಿ ದೊಣ್ಣೆಯಿಂದ ಹೊಡೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ದಾವಣಗೆರೆ ಮೂಲದ ಸುಧಾಕರ್ (೪೩) ಎಂಬುವರು ಕೊಲೆಯಾಗಿದ್ದಾರೆ. ಕೆ.ಸತ್ಯವಾರ ಗ್ರಾಮದ ನಾಗಭೂಷಣ್ ಅಲಿಯಾಸ್ ನಾಗ, ಚಂದ್ರಶೇಖರ್ ಅಲಿಯಾಸ್ ಚಂದ್ರು, ಬಾಬು ಅಲಿಯಾಸ್ ಪೈಂಟರ್ ಬಾಬು ಆರೋಪಿಗಳಾಗಿದ್ದಾರೆ. ಮೃತ ಸುಧಾಕರ್ ಲಾರಿ ಚಾಲಕನಾಗಿದ್ದು, ಎಣ್ಣೆ ಪಾರ್ಟಿ ಮಾಡುವಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ನಂತರ ಅವಾಚ್ಯ ಪದ ಬಳಸಿ ಪರಸ್ಪರ ಬೈದಾಡಿಕೊಂಡಿದ್ದರು. ನಂತರ ಸ್ನೇಹಿತನನ್ನ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

news desk

times of bengaluru