ಒಂದೇ ನಿಮಿಷದಲ್ಲಿ ಬಿಸಿ ಬಿಸಿ ಇಡ್ಲಿ
ಬೆಂಗಳೂರು: ಒಂದೇ ನಿಮಿಷದಲ್ಲಿ ಇಡ್ಲಿ ನೀಡುವಂತಹ ವಿಶೇಷ ಯಂತ್ರ ಬೆಂಗಳೂರು ಮೂಲದ ಫ್ರೆಶ್ ಶಾಟ್ಸ್ ರೋಬೋಟಿಕ್ಸ್ ಸಂಸ್ಥೆ ವಿನ್ಯಾಸಗೊಳಿಸಿದೆ.ಈ ಯಂತ್ರ ಗ್ರಾಹಕರಿಗೆ ಕಾಲಾವಧಿಯಲ್ಲಿ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಇಡ್ಲಿ ನೀಡಲಿದೆ. ಯುಪಿಐ ಮೂಲಕ ಹಣ ಪಾವತಿ ಮಾಡಿದರೆ ಸಾಕು ಒಂದೇ ನಿಮಿಷದಲ್ಲಿ ಬಿಸಿ ಬಿಸಿ ಇಡ್ಲಿ ನಿಮಗೆ ಸಿಗುತ್ತೆ ಎಂದು ಸಂಸ್ಥೆ ತಿಳಿಸಿದೆ. ಹೆದ್ದಾರಿಗಳು, ಚಲನಚಿತ್ರ ಮಂದಿರ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ರೈಲು ನಿಲ್ದಾಣ, ಕಛೇರಿಗಳು ಸೇರಿ ಇನ್ನೂ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಯಂತ್ರ ಅಳವಡಿಸಿಕೊಳ್ಳಬಹುದು. ನಾಲ್ಕು ವಿವಿಧ ಇಡ್ಲಿಗಳನ್ನು ಈ ಯಂತ್ರದಲ್ಲಿ ತಯಾರಿಸಬಹುದು. ಈ ಬೋಟ್, ಇಡ್ಲಿಗಳನ್ನು ಬೇಯಿಸಿ, ಪ್ಯಾಕ್ ಮಾಡಿ ನೀಡುವ ಸ್ವಯಂಚಾಲಿತ ಯಂತ್ರ. ಇದರ ಜತೆಗೆ ಚಟ್ನಿ, ಸಾಂಬಾರ್ ಕೂಡ ಪಾರ್ಸಲ್ ಆಗಿ ಸಿಗುತ್ತೆ. ಇದೀಗ ಯಂತ್ರ ಪ್ರಾಯೋಗಿಕ ಹಂತದಲ್ಲಿದೆ. ಮುಂದಿನ ವರ್ಷದ ಏಪ್ರಿಲ್ ೨೨ಕ್ಕೆ ಲೋಕಾರ್ಪಣೆಯಾಗಲಿದೆ.
news desk
times of bengaluru