ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿ ಆದೇಶ

ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿ ಆದೇಶ

ಬೆಂಗಳೂರು: ಮೂರನೇ ತ್ರೈ ಮಾಸಿಕ ಕಂತಿನ ಅನುದಾನವನ್ನು ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿ ಆದೇಶಿಸಿದೆ.ಈ ಅನುದಾನದಲ್ಲಿ ಗ್ರಾಮ ಪಂಚಾಯ್ತಿಗಳು ವಿದ್ಯುತ್ ಬಿಲ್ ಪಾವತಿಸಲು, ಉಳಿದ ಹಣವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳುವುದು. ಗ್ರಾಮ ಪಂಚಾಯ್ತಿ ಸಿಬ್ಬಂದಿಗಳ ವೇತನ ಬಾಕಿ ಇದ್ದಲ್ಲಿ, ಅದಕ್ಕಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದೆ. ಇನ್ನೂ ಈ ತ್ರೈ ಮಾಸಿಕ ಅನುದಾನದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಸ್ವಚ್ಛತೆ ಸೇವೆ ನೀಡುವವರಿಗೆ ಅನುದಾನ ಪಾವತಿಸಲು ಕ್ರಮವಹಿಸುವುದು ಎಂದು ಹೇಳಿದೆ.
ಈ ಸಂಬAಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಚೇತನ ಎಂ ನಡವಳಿ ಹೊರಡಿಸಿದ್ದು, ಮೂರನೇ ತ್ರೈ ಮಾಸಿಕ ಕಂತಿನ ಅನುದಾನದ ಮೊತ್ತ ೨೨೫,೫೧,೦೭,೨೧೧ ಕೋಟಿ ಹಣವನ್ನು ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಲಾಗಿದೆ.

news desk

times of bengaluru