ಸುಧಾರಾಣಿಯವರಿಗೆ ಗೌರವ ಡಾಕ್ಟರೇಟ್ ಪದವಿ

ಸುಧಾರಾಣಿಯವರಿಗೆ ಗೌರವ ಡಾಕ್ಟರೇಟ್ ಪದವಿ

ಬೆಂಗಳೂರು: ೧೨ನೇ ವಯಸ್ಸಿನಲ್ಲಿಯೇ ‘ಆನಂದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಧಾರಾಣಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಇನ್ನು ಮುಂದೆ ಡಾ.ಸುಧಾರಾಣಿಯಾಗಲಿದ್ದಾರೆ. ೪೮ ವರ್ಷದ ಈ ನಟಿ ಕಲಾ ಕ್ಷೇತ್ರದಲ್ಲಿ ತೋರಿಸಿರುವ ಸಾಧನೆಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿ ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಿದೆ ಎಂದು ಇನ್ಸಾ÷್ಟ ಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

news desk

times of bengaluru