ಈ ಬಾರಿ ಖುಷಿ ಆಚರಣೆ ಮಾಡುವುದಕ್ಕೆ ಅವರೇ ಇಲ್ಲ

ಈ ಬಾರಿ ಖುಷಿ ಆಚರಣೆ ಮಾಡುವುದಕ್ಕೆ ಅವರೇ ಇಲ್ಲ

ಬೆಂಗಳೂರು: ಪುನೀತ್-ಅಶ್ವಿನಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನವಾದ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲದೇ ಅಶ್ವಿನಿ ಪುನೀತ್ ನೋವಲ್ಲಿ ಕಳೆಯುವಂತಾಗಿದೆ. ಅಶ್ವಿನಿ- ಪುನೀತ್ ತಮ್ಮ ಮದುವೆ ವಾರ್ಷಿಕೋತ್ಸವ ಇಂದು ಡಿಸೆಂಬರ್ ಕ್ಕೆ ಆಚರಿಸಿಕೊಳ್ಳಬೇಕಿತ್ತು. ಇಷ್ಟು ವರ್ಷ ಪುನೀತ್ ತಮ್ಮ ಪತ್ನಿ ಜೊತೆಗೆ ಈ ವಿಶೇಷ ದಿನವನ್ನು ಖುಷಿಯಿಂದಲೇ ಕಳೆಯತ್ತಿದ್ದರು. ಆದರೆ ಈ ಬಾರಿ ಖುಷಿ ಆಚರಣೆ ಮಾಡುವುದಕ್ಕೆ ಅವರೇ ಇಲ್ಲ.ಅತ್ತ ಪುನೀತ್ ಅಭಿಮಾನಿಗಳೂ ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. ಯಾವತ್ತೂ ನಿಮಗೆ ಖುಷಿಯಿಂದ ವಿಶ್ ಮಾಡುತ್ತಿದ್ದೆವು. ಆದರೆ ಈ ಬಾರಿ ವಿಶ್ ಮಾಡುವಾಗ ಕಣ್ಣೀರು ಬರುತ್ತಿದೆ ಎಂದಿದ್ದಾರೆ. ಜತೆಗೆ ಅಪ್ಪು ಫೋಟೋ ಹಂಚಿ ನೋವು ಹಂಚಿಕೊಳ್ಳುತ್ತಿದ್ದಾರೆ.

news desk

times of bengaluru