ಜೇಮ್ಸ್ ಸಿನಿಮಾ ತೆರೆಗೆ ತರಲು ಚಿತ್ರತಂಡ ನಿರ್ಧಾರ

ಜೇಮ್ಸ್ ಸಿನಿಮಾ ತೆರೆಗೆ ತರಲು ಚಿತ್ರತಂಡ ನಿರ್ಧಾರ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ‘ಜೇಮ್ಸ್’ ಚಿತ್ರವನ್ನು ಪೂರ್ಣ ಮಾಡಿ ರಿಲೀಸ್ ಮಾಡುವುದಾಗಿ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಈ ಹಿಂದೆ ಹೇಳಿದ್ದಾರೆ. ಅಂತೆಯೇ ಈಗ ಚಿತ್ರದ ಶೂಟಿಂಗ್ ಶುರು ಮಾಡಿದ್ದಾರೆ. ಸದ್ಯ ‘ಜೇಮ್ಸ್’ ಚಿತ್ರದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಬಾಕಿ ಉಳಿದಿರುವ ಕೆಲವು ಸಾಹಸ ಸನ್ನಿವೇಶಗಳನ್ನು ಗೋವಾದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಜೇಮ್ಸ್’ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ.ಇನ್ನೂ ‘ಜೇಮ್ಸ್’ ಸಿನಿಮಾದಲ್ಲಿ ಅಪ್ಪು ಮುಂದುವರೆದ ಭಾಗದಲ್ಲಿ ಯಾರು ಅಭಿನಯಿಸುತ್ತಾರೆ? ಅಪ್ಪು ಅವರನ್ನು ಪ್ರತಿನಿಧಿಸುವವರು ಯಾರು? ಅವರ ಧ್ವನಿಯನ್ನು ಯಾರು ಡಬ್ ಮಾಡುತ್ತಾರೆ? ಎಂಬುದರ ಬಗ್ಗೆ ಚಿತ್ರ ತಂಡ ಮಾತನಾಡಲಿದೆ.

news desk

times of bengaluru