ಪ್ರೊ ಕಬಡ್ಡಿ ಕೂಟದ ಪಂದ್ಯಗಳು ಆಯೋಜನೆ

ಪ್ರೊ ಕಬಡ್ಡಿ ಕೂಟದ ಪಂದ್ಯಗಳು ಆಯೋಜನೆ

ಬೆಂಗಳೂರು: ಈ ಬಾರಿ ಪ್ರೊ ಕಬಡ್ಡಿ ಕೂಟದ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದ್ದು, ಆತಿಥೇಯ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಉದ್ಘಾಟನಾ ಪಂದ್ಯದಲ್ಲಿ ಎದುರಾಗಲಿವೆ. ವೈಟ್‌ಫೀಲ್ಡ್ನಲ್ಲಿರುವ ಶೆರಟಾನ್ ಗ್ರ‍್ಯಾಂಡ್ ಹೊಟೇಲ್‌ನಲ್ಲಿ ಕೂಟ ನಡೆಯಲಿದೆ.ಪುತ್ತೂರಿನವರಾದ ಪ್ರಶಾಂತ್ ಕುಮಾರ್ ರೈ ಪಾಟ್ನಾ ಪೈರೇಟ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಕೂಟದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ರೈ, ಪ್ರಬಲ ರೈಡಿಂಗ್‌ನಿAದ ಗಮನ ಸೆಳೆದಿದ್ದಾರೆ. ಒಟ್ಟು ೯೭ ಪಂದ್ಯ ಗಳನ್ನಾಡಿದ್ದಾರೆ. ದಾಳಿಯ ಮೂಲಕ ೪೦೩ ಅಂಕ ಗಳಿಸಿದ್ದಾರೆ. ಕ್ಯಾಚ್ ಮತ್ತು ಇತರ ಆಟವೆಲ್ಲ ಸೇರಿದರೆ ೪೧೨ ಅಂಕಗಳು ಅವರ ಬಳಿಯಿವೆ. ೮ನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಅರ್ಧ ಭಾಗದ ವೇಳಾಪಟ್ಟಿ ಮಾತ್ರ ಪ್ರಕಟವಾಗಿದೆ. ಈ ಪ್ರಕಾರ ಡಿ. ೨೨ರಿಂದ ಜ. ೨೨ರ ವರೆಗಿನ ಪಂದ್ಯಗಳ ಮಾಹಿತಿ ಲಭ್ಯವಾಗಿದೆ. ಆರಂಭದ ೪ ದಿನಗಳ ಕಾಲ ಹಾಗೂ ಜ. ೧, ೮ ಮತ್ತು ೧೫ರಂದು ತಲಾ ಮೂರು ಪಂದ್ಯಗಳು ನಡೆಯಲಿವೆ. ಉಳಿದೆಲ್ಲ ದಿನಗಳಲ್ಲಿ ತಲಾ ಎರಡು ಪಂದ್ಯಗಳು ನಡೆಯಲಿವೆ.

news desk

times of bengaluru