ಕಾರಾಗೃಹಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಬೇಕಿದೆ
ಬೆಂಗಳೂರು: ರಾಜ್ಯದ ಎಷ್ಟು ಕಾರಾಗೃಹಗಳಲ್ಲಿ ಅಂತರ್ಜಾಲ ಸಂಪರ್ಕವಿದೆ ಹಾಗೂ ಎಷ್ಟಕ್ಕೆ ಹೊಸದಾಗಿ ಕಲ್ಪಿಸಬೇಕಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.ರಾಜ್ಯದ ಕಾರಾಗೃಹಗಳಲ್ಲಿನ ಸ್ಥಿತಿಗತಿ ಬಗ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಶಿಕ್ಷೆಗೊಳಗಾಗಿರುವ ಬಹಳಷ್ಟು ಕೈದಿಗಳು ಜೈಲಿನಲ್ಲೇ ಕೊಳೆಯುತ್ತಿರುತ್ತಾರೆ. ಅವರಿಗೆ ಯಾವ ನೆರವು ಸಿಗುವುದಿಲ್ಲ. ಅಂತವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಮೂಲಕ ಅವರಿಗೆ ನೆರವು ಕಲ್ಪಿಸಬಹುದು ಎಂದು ಕೋರ್ಟ್ ಹೇಳಿತು. ಆಧುನಿಕ ಯುಗದಲ್ಲಿ ರಾಜ್ಯದ ಕಾರಾಗೃಹಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಬೇಕಿದೆ. ಇದರಿಂದ ಬಹಳಷ್ಟು ಸಮಸ್ಯೆ ಬಗೆಹರಿಸಬಹುದು.
news desk
times of bengaluru