ಸಂತಸದ ಸುದ್ದಿ ಕೊಟ್ಟ ಅಮೂಲ್ಯಾ

ಸಂತಸದ ಸುದ್ದಿ ಕೊಟ್ಟ ಅಮೂಲ್ಯಾ

ಅಮೂಲ್ಯ – ಜಗದೀಶ್ ಮದುವೆ ಆಗಿ ನಾಲ್ಕು ವರ್ಷಗಳ ಬಳಿಕ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ‘ನಾವೀಗ ಕೇವಲ ಇಬ್ಬರಲ್ಲ..’ ಎಂಬ ಕ್ಯಾಪ್ಷನ್ ಮೂಲಕ ಅಮೂಲ್ಯ ಸಂತೋಷದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಶುಭಸುದ್ದಿ ಹಂಚಿಕೊಳ್ಳಲು ಅಮೂಲ್ಯ ಹಾಗು ಜಗದೀಶ್ ಮಾಡಿಸಿರುವ ಫೋಟೋಶೂಟ್ ಸಖತ್ ಗಮನ ಸೆಳೆಯುತ್ತಿದೆ.ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ, ಗಣೇಶ್, ಯಶ್, ಪ್ರೇಮ್‌ಅಜಯ್ ರಾವ್, ದುನಿಯಾ ವಿಜಯ್ ಜೊತೆ ಅಮೂಲ್ಯ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮೂಲ್ಯ ಹಾಗೂ ಜಗದೀಶ್ ದಂಪತಿಗೆ ಚಿತ್ರರಂಗದವರು ಹಾಗು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

news desk

times of bengaluru