ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಬಿಗ್ ಶಾಕ್

ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಬಿಗ್ ಶಾಕ್

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೂತನ ಕೆ ಎಸ್ ಆರ್ ಟಿ ಸಿ ಲಾಜಿಸ್ಟಿಕ್ಸ್ ಸೇವೆಗಳನ್ನು ಆರಂಭಿಸಲಾಗಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ.ಈ ಕುರಿತಂತೆ ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ಶಿವಯೋಗಿ ಸಿ ಕಳಸದ ಆದೇಶ ಹೊರಡಿಸಿದ್ದು,ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಹೊರತಾಗಿ, ಪ್ರಯಾಣಿಕರ ಸಹಿತ ಹಾಗೂ ಪ್ರಯಾಣಿಕ ರಹಿತ ಲಗೇಜ್ ಗಳನ್ನು ಸಾಗಿಸಲು ಅವಕಾಶವಿದ್ದು, ಈ ಲಗೇಜ್ ಗಳಿಗೆ ವಿಧಿಸಬೇಕಾದ ಟಿಕೆಟ್ ದರಗಳಿಗೆ ಪ್ರತ್ಯೇಕ ದರ ಪಟ್ಟಿ ಜಾರಿ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಪ್ರಯಾಣಿಕರಿಗೆ ಮತ್ತಷ್ಟು ಸಂಕಷ್ಟ ಉಂಟಾಗಲಿದೆ. ಇನ್ನೂ ಹೊಸ ನೂತನ ಲಗೇಜ್ ದರ ಡಿಸೆಂಬರ್ ೧೦ ರಿಂದಲೇ ಜಾರಿಗೆ ಬರಲಿದೆ.

 

news desk

times of bengaluru