ರೂಪಾಂತರ ಒಮಿಕ್ರೋನ್ ಕರ್ನಾಟಕದಲ್ಲಿ ಪತ್ತೆ

ರೂಪಾಂತರ ಒಮಿಕ್ರೋನ್ ಕರ್ನಾಟಕದಲ್ಲಿ ಪತ್ತೆ

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರ ಒಮಿಕ್ರೋನ್ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಎರಡು ಕೇಸ್‌ಗಳು ಬೆಂಗಳೂರಿನಲ್ಲಿ ಕಂಡು ಬಂದಿವೆ ಎಂದು ಲವ ಅಗರವಾಲ್ ಮಾಹಿತಿ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಇಬ್ಬರು ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂಬ ಮಾಹಿತಿ ತಿಳಿಸಿದ್ದಾರೆ.ಒಮಿಕ್ರೋನ್ ಕೇಸ್ ಪತ್ತೆಯಾಗಿರುವುದರಿಂದ ಯಾವುದೇ ರೀತಿಯ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ , ಕರ್ನಾಟಕದಲ್ಲಿ 66 ವರ್ಷದ ವೃದ್ಧ ಹಾಗೂ 46  ವರ್ಷದ ವ್ಯಕ್ತಿಯಲ್ಲಿ ಒಮಿಕ್ರೋನ್ ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊAಡಿದೆ. ಇವರಿಬ್ಬರು ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು.

news desk

times of bengaluru