ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಬೆಂಗಳೂರು: ನಗರದಲ್ಲಿ ಇಬ್ಬರಲ್ಲಿ ಒಮಿಕ್ರೋನ್ ಜತೆಗೆ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.ಡಿಸೆಂಬರ್ ೨ರಂದು ೨೦೬ ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡಾ ೫,೦೨೪ಕ್ಕೆ ಏರಿಕೆಯಾಗಿದೆ. ನಿನ್ನೆ ಇಬ್ಬರು ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೂ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ೧೬೩೪೧ಕ್ಕೆ ಏರಿಕೆಯಾಗಿದೆ. ಎರಡೂ ಅಲೆಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೧೨,೫೬,೮೨೩ ಕ್ಕೆ ಏರಿಕೆಯಾಗಿದ್ದರೆ, ಗುಣಮುಖರಾದವರ ಸಂಖ್ಯೆ 12,35458 ಇದೆ. ಬೆಳ್ಳಂದೂರು ವಾರ್ಡ್ನಲ್ಲಿ 6, ದೊಡ್ಡನೆಕ್ಕುಂದಿ, ಹಗದೂರು ವಾರ್ಡ್ಗಳಲ್ಲಿ ತಲಾ 4, ಆರ್ ಆರ್ ನಗರ, ಕಾಡುಗೋಡಿ, ವಸಂತಪುರ ಬೇಗೂರು, ವರ್ತೂರು, ಹೆಚ್‌ಎಸ್ ಆರ್ ಲೇಔಟ್, ಸಿವಿ ರಾಮನ್ ನಗರ ವಾರ್ಡ್ಗಳಲ್ಲಿ ತಲಾ ೩ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಒಟ್ಟು ೫೬ ಮೈಕ್ರೋ ಕಂಟೈನ್‌ಮೆAಟ್ ಪ್ರದೇಶಗಳನ್ನು ಗುರುತಿಸಲಾಗಿದೆ.

news desk

times of bengaluru