ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್ನಲ್ಲಿ ಫೋಟೋ ತೆಗೆದ ವಿಚಾರವಾಗಿ ಮಾತಿನ ಚಕಮಕಿಯಾಗಿ ಹಲ್ಲೆ ಮಾಡಲಾಗಿದೆ.ಗುರುವಾರ ತಡರಾತ್ರಿ ಸದಾಶಿವನಗರ ಬಳಿಯ ಹ್ಯಾಮರ್ಡ್ ಕ್ಲಬ್ನಲ್ಲಿ ಕಿರಿಕ್ ಕೀರ್ತಿ ಹಾಗೂ ಸ್ನೇಹಿತರು ಮದ್ಯಸೇವನೆಯಲ್ಲಿ ತೊಡಗಿದ್ದರು. ಇದೇ ವೇಳೆ ಪಕ್ಕದ ಟೇಬಲ್ನಲ್ಲಿದ್ದ ಮತ್ತೊಂದು ಗುಂಪಿನ ಸದಸ್ಯನೊಬ್ಬ ಮೊಬೈಲ್ನಲ್ಲಿ ಫೋಟೊ ತೆಗೆದಿದ್ದಾನೆ. ಇದನ್ನು ಕೀರ್ತಿ ಪ್ರಶ್ನಿಸಿದ್ದಾರೆ. ಈ ವೇಳೆ, ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ನಡೆದು, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಬಿಯರ್ ಬಾಟಲಿಯಿಂದ ಕಿರಿಕ್ ಕೀರ್ತಿ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿರುವ ಅವರು, ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ.
news desk
times of bengaluru