ವೈದ್ಯರ ಮನೆಯ ರಸ್ತೆ ಸೀಲ್ ಡೌನ್

ವೈದ್ಯರ ಮನೆಯ ರಸ್ತೆ ಸೀಲ್ ಡೌನ್

ಬೆಂಗಳೂರು: ವೈದ್ಯರಲ್ಲಿ ಒಮಿಕ್ರೋನ್ ವೈರಸ್ ಪತ್ತೆಯಾಗಿದ್ದು, ಇದೀಗ ಅವರ ಪತ್ನಿಗೂ ಬಂದಿರೋದು ದೃಢವಾಗಿದೆ. ಆರ್‌ಬಿಐ ಲೇಔಟ್‌ನ ೧೦೦ ಮೀಟರ್ ರಸ್ತೆಯನ್ನು ಬಿಬಿಎಂಪಿ ಸೀಲ್‌ಡೌನ್ ಮಾಡಿದೆ. ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಸೋಂಕಿತ ವ್ಯಕ್ತಿಯ ಅಕ್ಕಪಕ್ಕದ ಮನೆಯವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು ೩೨ ಜನರ ಸ್ಯಾಂಪಲ್ಸ್ ಅನ್ನು ಬಿಬಿಎಂಪಿ ಸಂಗ್ರಹಿಸಿದ್ದು, ಇಂದು ಎಲ್ಲರ ವರದಿ ಬರಲಿದೆ.ಒಮಿಕ್ರಾನ್ ಸೋಂಕಿತ ವೈದ್ಯರ ಪತ್ನಿ ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿ ಕಣ್ಣಿನ ವೈದ್ಯರಾಗಿ ಕೆಲಸ ಮಾಡ್ತಿದ್ದಾರೆ. ಕಣ್ಣಿನ ವೈದ್ಯರಾಗಿರೋದ್ರಿಂದ ರೋಗಿಗಳ ಜೊತೆ ಕ್ಲೋಸ್ ಕಾಂಟ್ಯಾಕ್ಟ್ ಉಂಟಾಗಿರಬಹುದು. ಹೀಗಾಗಿ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಟೆಸ್ಟ್ಗೆ ಒಳಪಡಿಸಲಾಗಿದೆ.ಸದ್ಯ ಒಮಿಕ್ರೋನ್ ಸೋಂಕಿತ ವೈದ್ಯ ಹಾಗು ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ವೈದ್ಯರ ಮನೆಯಲ್ಲಿ ಒಟ್ಟು ೧೦ ಮಂದಿ ವಾಸವಿದ್ದು, ಉಳಿದ ೮ ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿದೆ. ಹೀಗಾಗಿ, ೮ ಮಂದಿಯನ್ನು ಹೋಮ್ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ವೈದ್ಯರ ಮನೆಯನ್ನು ಕಂಟೈನ್‌ಮೆAಟ್‌ಝೋನ್ ಎಂದು ಘೋಷಿಸಿ ಸೀಲ್ ಮಾಡಲಾಗಿದೆ.

news desk

times of bengaluru