ಸೋಂಕಿತ ವ್ಯಕ್ತಿಗಳ ಸಂಪರ್ಕಿತರ ಪತ್ತೆಗೆ ಸೂಚನೆ
ಬೆಂಗಳೂರು: ಒಮಿಕ್ರೋನ್ ತಡೆಗೆ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಒಮಿಕ್ರೋನ್ ಸೋಂಕಿತ ವ್ಯಕ್ತಿಗಳ ಸಂಪರ್ಕಿತರ ಪತ್ತೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದರು. ಇಂದು ಒಮಿಕ್ರೋನ್ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದAತೆ ಸಭೆ ಇದ್ದು, ತಾಂತ್ರಿಕ ಸಲಹಾ ಸಮಿತಿ ತಜ್ಞರು ಏನು ಹೇಳ್ತಾರೆ ಎಂಬುದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಈ ಸಭೆಯಲ್ಲಿ ಒಮಿಕ್ರೋನ್ ವೈರಸ್ ನಿಯಂತ್ರಣಕ್ಕಾಗಿ ಬೇರೆ ಬೇರೆ ದೇಶದಲ್ಲಿ ಏನು ಪ್ರೋಟೋಕಾಲ್ ಇದೆ? ಯಾವ ರೀತಿ ನಿಭಾಯಿಸಬೇಕು? ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
news desk
times of bengaluru