ಜಿಎಸ್ಟಿ ಮತ್ತೆ ಏರಿಕೆ ಮಾಡಿ ವ್ಯಾಪಾರಿಗಳಿಗೆ ಶಾಕ್
ಬೆಂಗಳೂರು : ಗಾರ್ಮೆಂಟ್ಸ್, ಟೆಕ್ಸ್ಟೈಲ್ ಮೇಲಿನ ದರ ಇಳಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಏರಿಕೆ ಮಾಡಿ ವ್ಯಾಪಾರಿಗಳಿಗೆ ಶಾಕ್ ನೀಡಿದೆ. ಉಡುಪುಗಳು, ಜವಳಿಗಳ ಮೇಲೆ ಜಿಎಸ್ಟಿ ದರವನ್ನು ಶೇ.೫ರಿಂದ ೧೨ಕ್ಕೇರಿಸಿದೆ.
೨೦೨೨ ಜನವರಿ ೧ರಿಂದಲೇ ಜಾರಿಗೆ ಬರುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇದು ಗ್ರಾಹಕರಿಗೂ ಶೇ.೭ರಷ್ಟು ಹೊರೆ ಆಗಲಿದೆ. ರೈತರ ಕಾಯ್ದೆ ವಿಚಾರದಲ್ಲಿ ಸರ್ಕಾರ ಯೂಟರ್ನ್ ಪಡೆದಂತೆ ಗಾರ್ಮೆಂಟ್ಸ್ ವಿಚಾರದಲ್ಲೂ ಈ ನಿರ್ಧಾರ ಹಿಂಪಡೆಯಬೇಕೆAದು ಕರ್ನಾಟಕ ಗಾರ್ಮೆಂಟ್ ಅಸೋಸಿಯೇಷನ್ ಬೆಂಗಳೂರಿನ ಮಾಜಿ ಅಧ್ಯಕ್ಷ ಸಜ್ಜನ್ ರಾಜ್ ಮೆಹ್ತಾ ತಿಳಿಸಿದ್ದಾರೆ.ಗಾರ್ಮೆಂಟ್ಸ್, ಟೆಕ್ಸ್ಟೈಲ್ಸ್ಗಳ ಮೇಲೆ ಏರಿಕೆ ಆಗುತ್ತಿದೆ. ಪ್ರಧಾನಮಂತ್ರಿ, ಸಿಎಂ, ಕೇಂದ್ರ ಹಣಕಾಸು ಸಚಿವರಿಗೆ ಈಗಾಗಲೇ ಮನವಿ ಪತ್ರ ಕಳಿಸಲಾಗಿದೆ. ಜಿಎಸ್ಟಿ ಈಗಿರುವ ಪ್ರಕಾರ ೯೯೯ ರೂ. ಬೆಲೆಯ ಬಟ್ಟೆಗಳ ಮೇಲೆ ೫% ಜಿಎಸ್ಟಿ, ೧೦೦೦ ರೂ. ಬಟ್ಟೆ ಮೇಲೆ ೧೨% ಜಿಎಸ್ಟಿ ಇದೆ. ಜಿಎಸ್ಟಿ ಕಡಿಮೆ ಮಾಡದಿದ್ದರೆ ಹೋರಾಟ ಒಂದೇ ನಮಗಿರುವ ದಾರಿ ಎಂದರು.
news desk
times of bengaluru