ರಿಯಾಲಿಟಿ ಶೋಗಳಿಗೆ ಆದ್ಯತೆ ಕೊಡಲಿರುವ ಹೇಯು

ರಿಯಾಲಿಟಿ ಶೋಗಳಿಗೆ ಆದ್ಯತೆ ಕೊಡಲಿರುವ ಹೇಯು

ಬೆಂಗಳೂರು: ರಿಯಾಲಿಟಿ ಶೋ, ವೆಬ್‌ಸೀರಿಸ್ ನೋಡುವ ಹವ್ಯಾಸ ಇರುವವರಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮಾದರಿಯ ಮತ್ತೊಂದು ಓಟಿಟಿ ಫ್ಲಾಟ್‌ಫಾರ್ಮ್ ಭಾರತದಲ್ಲಿ ಪ್ರಾರಂಭಗೊAಡಿದೆ. ಹೇಯು ಹೆಸರಿನ ಈ ಪ್ಲಾಟ್‌ಫಾರ್ಮ್ ಈಗ ಭಾರತದಲ್ಲಿಯೂ ತನ್ನ ಸ್ಟ್ರೀಮಿಂಗ್ ಆರಂಭಿಸಿದೆ.
ಹೇಯು ಈಗಾಗಲೇ ೨೭ ದೇಶಗಳಲ್ಲಿ ತನ್ನ ಸೇವೆ ನೀಡುತ್ತಿದ್ದು, ಅತ್ಯಂತ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಆಗಿ ರೂಪುಗೊಂಡಿದೆ. ಇದೀಗ ಭಾರತದಲ್ಲಿ ತನ್ನ ಸೇವೆ ಪ್ರಾರಂಭಿಸಿದೆ. ಹೇಯು ಹೆಚ್ಚಾಗಿ ರಿಯಾಲಿಟಿ ಶೋಗಳಿಗೆ ಆದ್ಯತೆ ನೀಡುತ್ತಿದೆ. ದಿ ರಿಯಲ್ ಹೌಸ್‌ವೈಫ್ಸ್ ಫ್ಯಾಮಿಲಿ ಕರ್ಮಾ ಇತ್ಯಾದಿ ಇಂಗ್ಲಿಷ್ ಭಾಷೆಯ ರಿಯಾಲಿಟಿ ಶೂಗಳು ಪ್ರಸಾರಗೊಳ್ಳಲಿದೆ. ಪ್ರಸ್ತುತ ಇಂಗ್ಲಿಷ್ ಭಾಷೆಯಲ್ಲಿ ಈ ಓಟಿಟಿ ಇರಲಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳ ರಿಯಾಲಿಟಿ ಶೋ ಹಾಗೂ ವೆಬ್‌ಸೀರಿಸ್ ಪ್ರಾರಂಭಿಸುವುದಾಗಿ ಹೇಯು ಡೈರೆಕ್ಟರ್ ಹೆಂಡ್ರಿಕ್ ಮೆಕ್ಡರ್ಮಾಟ್ ಹೇಳಿದ್ದಾರೆ.

news desk

times of bengaluru