ಸದ್ಯಕ್ಕೆ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ

ಸದ್ಯಕ್ಕೆ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ

ಬೆಂಗಳೂರು : ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹೇಳಿದಂತೆ ನಾನು ಪ್ರಮಾಣ ಮಾಡಲು ಸಿದ್ಧ. ಇಲ್ಲೇ ಬೆಂಗಳೂರಿನಲ್ಲೇ ಶ್ರೀ ವೆಂಕಟೇಶ್ವರನ ದೇವಸ್ಥಾನ ಇದೆ. ಪ್ರಮಾಣ ಮಾಡಲು ನಾನು ಸಿದ್ಧ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸವಾಲು ಹಾಕಿದರು.
ಆರ್.ಟಿ.ನಗರ ನಿವಾಸದಲ್ಲಿ ಸಿಎಂ ಭೇಟಿ ಮಾಡಿ ನಂತರ ಮಾತನಾಡಿದರು. ಸದ್ಯಕ್ಕೆ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಪೊಲೀಸರು ಅರ್ಧ ತನಿಖೆ ಮಾಡಿದ್ದಾರೆ. ಪೊಲೀಸರೇ ತನಿಖೆ ಮಾಡಲಿ ಅಂತಾ ಸಿಎಂಗೆ ಹೇಳಿದ್ದೇನೆ. ಹೆಚ್ಚಿನ ತನಿಖೆ ಬೇಕಾದರೆ ಆಮೇಲೆ ಸಿಎಂ ನಿರ್ಧಾರ ಮಾಡ್ತಾರೆ. ಸದ್ಯಕ್ಕೆ ಪೊಲೀಸರೇ ತನಿಖೆ ಮಾಡಲಿ ಎಂದರು. ವೆಂಕಟೇಶ್ವರನ ಮೇಲೆ ಆಣೆ ಮಾಡಿದ್ರೆ ಕೇಸ್ ಮುಚ್ಚಿ ಹೋಗುತ್ತಾ?. ತನಿಖೆ ಆಗಲಿ, ತನಿಖೆಯಲ್ಲಿ ಸತ್ಯ ಗೊತ್ತಾಗುತ್ತದೆ. ತಿರುಪತಿಗೆ ಪ್ರಮಾಣ ಮಾಡಲು ಹೋದರೆ, ಗೋಪಾಲಕೃಷ್ಣನಿಗೆ ಕಷ್ಟ.ಅಲ್ಲಿನ ಜನ ಗೋಪಾಲಕೃಷ್ಣ ಮೇಲೆ ಸಿಟ್ಟಾಗಿದ್ದಾರೆ. ತಿರುಪತಿಯಲ್ಲಿ ಅವನಿಗೆ ಸೇಫ್ ಇಲ್ಲ. ನನಗೆ ತಿರುಪತಿಯಲ್ಲಿ ಬಹಳ ಅಭಿಮಾನಿಗಳು ಇದ್ದಾರೆ. ನಾನು ನಿನ್ನೆಯಷ್ಟೇ ತಿರುಪತಿಗೆ ಹೋಗಿದ್ದೆ. ಗೋಪಾಲಕೃಷ್ಣ ಆಂಧ್ರ ಹೆಸರು ಕೆಡಿಸುತ್ತಿದ್ದಾರೆ, ಅವರನ್ನು ನೋಡಿಕೊಳ್ತೀವಿ ಅಂತಾ ಕೆಲವರು ಹೇಳಿದ್ರು ಎಂದು ತಿಳಿಸಿದರು.

news desk

times of bengaluru