ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆಗೆ ಸೂಚನೆ

ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆಗೆ ಸೂಚನೆ

ರಾಜ್ಯಕ್ಕೆ ಒಮಿಕ್ರಾನ್ ಪ್ರವೇಶ ಹಿನ್ನೆಲೆ ಸರ್ಕಾರ ಕಟ್ಟೆಚ್ಚರವಹಿಸಿದ್ದು, ಕ್ಲಸ್ಟರ್‌ಗಳಲ್ಲಿ ಸರಿಯಾಗಿ ಕಾರ್ಯ ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ.ನಗರದಲ್ಲಿ ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ಅಪಾರ್ಟ್ಮೆಂಟ್‌ಗಳಲ್ಲಿ ಕ್ಲಸ್ಟರ್ ಇದ್ದು, ಅಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆಗೆ ಸೂಚನೆ ನೀಡಿದ್ದೇನೆ. ಈ ಮೊದಲು ಹತ್ತು ಕೇಸ್ ಇದ್ರೆ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತಿತ್ತು. ಈಗ ಮೂರು ಕೇಸ್ ಇದ್ರೂ ಕ್ಲಸ್ಟರ್ ಮಾಡ್ತಿದ್ದೇವೆ. ಅಲ್ಲದೆ ಕ್ಲಸ್ಟರ್ ಅಪಾರ್ಟ್ಮೆಂಟ್‌ಗಳಲ್ಲಿರೋರಿಗೆ ಟೆಸ್ಟ್, ಚಿಕಿತ್ಸೆ, ಲಸಿಕೆ ಹಾಕಲು ಸೂಚಿಸಲಾಗಿದೆ. ಒಮಿಕ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದಿದೆ. ಅದರ ಸೂಕ್ತ ಚಿಕಿತ್ಸೆಯ ಮಾದರಿ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಇದು ಹರಡುವ ವೇಗ ಹೆಚ್ಚು. ಆದರೆ, ಪರಿಣಾಮಕಾರಿ ಅಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು. ಎರಡು ಡೋಸ್ ಆಗಿರುವ ಹೊರಗಿನ ವ್ಯಕ್ತಿಗಳನ್ನು ಮಾತ್ರ ಕ್ಲಸ್ಟರ್‌ನಲ್ಲಿರುವ ವ್ಯಕ್ತಿಗಳನ್ನು ಭೇಟಿ ಮಾಡಬೇಕು ಎಂದು ಸಿಎಂ ತಿಳಿಸಿದರು.

news desk

times of bengaluru
.