ಧಾರಾವಾಹಿಯಲ್ಲಿ ಮಿಂಚಲಿರುವ ವಿಜಯ್, ವೈಷ್ಣವಿ ?

ಧಾರಾವಾಹಿಯಲ್ಲಿ ಮಿಂಚಲಿರುವ ವಿಜಯ್, ವೈಷ್ಣವಿ ?

ಬೆಂಗಳೂರು: ನಟ ವಿಜಯ್ ಸೂರ್ಯ ಮತ್ತೇ ಸೀರಿಯಲ್ ಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಅಗ್ನಿಸಾಕ್ಷಿ ಧಾರವಾಹಿ ಬಳಿಕ ವಿಜಯ್ ಸೂರ್ಯ ಸ್ಟಾರ್ ಸುವರ್ಣದಲ್ಲಿ ಪ್ರೇಮಲೋಕ, ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಸ್ಯಾಂಡಲ್ ವುಡ್ ನಲ್ಲೂ ಸಿನಿಮಾಗಳನ್ನು ಮಾಡುತ್ತಿರುವ ವಿಜಯ್ ಜೀ ಕನ್ನಡ ವಾಹಿನಿಯ ಹೊಸ ಧಾರವಾಹಿ ‘ಡಾ.ಕರ್ಣ’ ಎನ್ನುವ ಧಾರವಾಹಿಗೆ ವಿಜಯ್ ಸೂರ್ಯ ನಾಯಕರಾಗಿದ್ದಾರೆ. ವಿಶೇಷವೆಂದರೆ ಈ ಧಾರವಾಹಿಗೆ ವಿಜಯ್ ಸೂರ್ಯ ಹಿಟ್ ಪೇರ್ ವೈಷ್ಣವಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಗಳಿವೆ.ಸದ್ಯದಲ್ಲೇ ಈ ಧಾರವಾಹಿ ಲಾಂಚ್ ಆಗಲಿದೆ.

news desk

times of bengaluru