ಪ್ರಯಾಣಿಕರನ್ನು ಪತ್ತೆ ಮಾಡಿದ ಬಿಬಿಎಂಪಿ

ಪ್ರಯಾಣಿಕರನ್ನು ಪತ್ತೆ ಮಾಡಿದ ಬಿಬಿಎಂಪಿ

ಬೆಂಗಳೂರು :ದಕ್ಷಿಣ ಆಫ್ರಿಕಾದಿಂದ ಬಂದು ನಾಪತ್ತೆಯಾಗಿದ್ದ ೧೦ ಮಂದಿ ಪ್ರಯಾಣಿಕರ ಪೈಕಿ ಇದೀಗ ಬಿಬಿಎಂಪಿ ೯ ಪ್ರಯಾಣಿಕರನ್ನು ಪತ್ತೆ ಮಾಡಿದೆ. ೧೦ ಜನರ ಪೈಕಿ ಬಿಬಿಎಂಪಿ ಸಂರ‍್ಕಕ್ಕೆ ೯ ಮಂದಿ ಸಿಕ್ಕಿದ್ದು, ಪೊಲೀಸ್ ಇಲಾಖೆಯ ಸಹಾಯದಿಂದ ೯ ಪ್ರಯಾಣಿಕರನ್ನು ಬಿಬಿಎಂಪಿ ಪತ್ತೆ ಮಾಡಿದೆ.
ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ಸೋಂಕು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ೧೦ ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದರು. ಒಮಿಕ್ರಾನ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ರ‍್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ವಿದೇಶದಿಂದ ಬಂದವರಿಗೆ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ.

news desk

times of bengaluru