ಕಟ್ಟಡಕ್ಕೆ, ರಸ್ತೆಗೆ ಶಿವರಾಮ್ ರವರ ಹೆಸರು ಇಡುತ್ತೇವೆ

ಕಟ್ಟಡಕ್ಕೆ, ರಸ್ತೆಗೆ ಶಿವರಾಮ್ ರವರ ಹೆಸರು ಇಡುತ್ತೇವೆ

ಬೆಂಗಳೂರು: ಯಾವುದಾದರೂ ಕಟ್ಟಡಕ್ಕೆ ಅಥವಾ ರಸ್ತೆಗೆ ಅವರ ಹಿರಿಯ ಕಲಾವಿದ ಶಿವರಾಮ್ ರವರ ಹೆಸರು ಇಡುತ್ತೇವೆ ಎಂದು ಸಚಿವ ಆರ್ ಅಶೋಕ್ ಹೇಳಿದರು. ನಾಳೆ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ಗಂಟೆ ಚಿತ್ರರಂಗದ ಕಡೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಅವಕಾಶ ಕಲ್ಪಿಸಲಾಗಿದೆ. ನಾಳೆ ಬೆಳಗ್ಗೆ ಮೃತದೇಹ ಕೊಂಡೊಯ್ಯಲಾಗುತ್ತದೆ. ಬಳಿಕ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುತ್ತದೆಎಂದರು.
ಶಿವರಾಮ್ ಚಿತ್ರರಂಗದ ಬಹಳ ಹಿರಿಯ ನಟರು. ನಾಗರಹಾವು ಸಿನಿಮಾದಿಂದ ಇದುವರೆಗೂ ನೂರಾರು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ತುಂಬಾ ಸಂಭಾವಿತ ಕಲಾವಿದರು ಶಿವರಾಮ್ ಎಂದು ಸಚಿವ ಆರ್ ಅಶೋಕ್ ನೆನಪು ಮಾಡಿಕೊಂಡರು.

news desk

times of bengaluru