ಡ್ರಗ್ಸ್ ಕೇಸ್ : ನೈಜೀರಿಯಾ ಪ್ರಜೆ ಬಂಧನ

ಬೆಂಗಳೂರು : ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದು ಪಾಸ್ ಪೋರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಅಲ್ಲದೆ 40 ಲಕ್ಷ ರೂ ಬೆಲೆಯ ಎಂಡಿಎಂಎ, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಈತನ ವಿರುದ್ಧ ಈಗಾಗಲೇ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ನಗರದ ವಡ್ಡರಪಾಳ್ಯ, ಕಾವೇರಿನಗರ, 3ನೆ ಕ್ರಾಸ್‍ನಲ್ಲಿರುವ ಕಟ್ಟಡದ 2ನೆ ಮಹಡಿ ಮನೆಯಲ್ಲಿ ವಾಸವಾಗಿದ್ದ ಡ್ರಗ್ ಪೆಡ್ಲರ್ ನೈಜೀರಿಯಾ ಪ್ರಜೆ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಈತ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ತೊಡಗಿಕೊಂಡು ತನ್ನ ಸಹಚರ ಮುಂಬೈನ ಮೈಕೇಲ್‍ನಿಂದ ಮಾದಕ ವಸ್ತು ಅಕ್ರಮವಾಗಿ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುವ ವೃತ್ತಿಗತ ಆರೋಪಿಯಾಗಿದ್ದಾರೆ. ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ.ಗೌತಮ್ ಮುಂದಾಳತ್ವದಲ್ಲಿ ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿದ್ದರು.

 

NEWS DESK

TIMES OF BENGALURU