ಬೆಂಗಳೂರಿಗರಿಗೆ ಮುದ ನೀಡುವ ಚಿತ್ರಕಲಾ ಪ್ರದರ್ಶನ

ಬೆಂಗಳೂರು : ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ತಾರ ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬಹುಭಾಷಾ ನಟಿ ಕಾಶೀಮಾ ರಫಿ ಚಾಲನೆ ನೀಡಿದ್ದಾರೆ. ª ಈ ಬಗ್ಗೆ ಕಾಶೀಮಾ ರಫಿ ಮಾತನಾಡಿ, ಮುಂಬರುವ ಮಹಾಶಿವರಾತ್ರಿಗೆ ಉತ್ಪನ್ನಗಳನ್ನು ಖರೀದಿಸಲು ಅಲ್ಲದೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಕಲಾವಿದರ ಕೈಚಳಕದ ಕಲಾಕೃತಿಗಳನ್ನು ನೋಡುವ ಮತ್ತು ಕೊಂಡುಕೊಳ್ಳುವ ಉತ್ತಮ ಅವಕಾಶವನ್ನು ಫಾಲ್ಕನ್ ಈವೆಂಟ್ಸ್ ನಿಮ್ಮ ಮುಂದೆ ಇಡುತ್ತಿದೆ.

ಇದೇ ಮಾರ್ಚ್ 4 ರಿಂದ ಮಾರ್ಚ್ 14 ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಚಿತ್ತಾರ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ.ಈ ಚಿತ್ತಾರದ ವಿಶೇಷವೆಂದರೆ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

ನಗರದ ಮಧ್ಯಭಾಗದ ಕರಕುಶಲ ವಸ್ತುಗಳಿಗೊಸ್ಕರವೇ ಬಹಳಷ್ಟು ಪ್ರಸಿದ್ದಿಯನ್ನು ಹೊಂದಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂತಹದೊಂದು ವಿಶಿಷ್ಟ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಮುಂಬರುವ ಹಬ್ಬದ ಸೀಸನ್‍ಗೆ ಶಾಪಿಂಗ್ ಮಾಡಲು ಹಾಗೂ ಒಂದು ಸಂಪೂರ್ಣ ದಿನದ ಶಾಪಿಂಗ್‍ನ ಅನುಭವ ಪಡೆಯಲು ಈ ಮೇಳ ಸೂಕ್ತ ಆಯ್ಕೆಯಾಗಿರಲಿದೆ ಎಂದು ಹೇಳಿದರು.

 

NEWS DESK

TIMES OF BENGALURU