ವಿಚಾರಣೆಗೆ ಹಾಜರಾದ ದಿನೇಶ್ ಕಲ್ಲಳ್ಳಿ

ಬೆಂಗಳೂರು : ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಿಡುಗಡೆ ಪ್ರಕರಣ ಸಂಬಂಧ, ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ತನಿಖಾಧಿಕಾರಿಗಳ ಮುಂದೆ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ವಿಚಾರಣೆಗೆ ಹಾಜರಾಗಿದ್ದಾರೆ.

ಕಳೆದ ನಿನ್ನೆ ತಮಗೆ ಸೂಕ್ತ ರೀತಿಯಲ್ಲಿ ಭದ್ರತೆ ನೀಡುವುದಾದರೇ ಮಾತ್ರವೇ ಠಾಣೆಗೆ ಬಂದು ವಿಚಾರಣೆ ಹಾಜರಾಗುವುದುದಾಗಿ ಭದ್ರತೆಯ ಕಾರಣ ನೀಡಿ, ವಿಚಾರಣೆಗೆ ಹಾಜರಾಗಿಲ್ಲ ಎಂಬುದಾಗಿ ದಿನೇಶ್ ಕಲ್ಲಳ್ಳಿ ತಿಳಿಸಿದ್ದರು. ಇಂದು ದಿಢೀರ್ ಕಬ್ಬನ್ ಪಾರ್ಕ್  ಪೊಲೀಸ್ ಠಾಣೆಯ ತನಿಖಾಧಿಕಾರಿಗಳ ಮುಂದೆ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ಸಂಬಂಧ ವಿಚಾರಣೆಗಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಹಾಜರಾಗಿದ್ದಾರೆ. ಇದರಿಂದಾಗಿ ಈಗ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ.

 

NEWS DESK

TIMES OF BENGALURU