ಕೃಷಿ ಇಲಾಖೆಯ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು : ಅಪರೂಪದ ವಿಶೇಷ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಡಿದ್ದಾರೆ.ಚಲನಚಿತ್ರ ರಂಗದಲ್ಲಿ ಎತ್ತರಕ್ಕೆ ಬೆಳೆದಿರುವ ದರ್ಶನ್ ನಟನೆಯ ಜೊತೆಗೆ ಕೃಷಿಕ ರೈತಾಪಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು,ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ.

ರೈತರ ಪರವಾಗಿ ದರ್ಶನ್‍ಗೆ ಅಭಿನಂದನೆಗಳು.ಕೃಷಿ ಇಲಾಖೆಗೆ ಕೃಷಿ ರಂಗಕ್ಕೆ ದರ್ಶನ್ ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಮೆಚ್ಚುಗೆಯ ಸಂಗತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಇದೇ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ದರ್ಶನ್‍ಗೆ ರೈತರ ಪರ ಕಳಕಳಿ ಇರುವುದು ಹೆಮ್ಮೆಯ ವಿಚಾರವಾಗಿದೆ. ದರ್ಶನ್ ಫಾರ್ಮ್ ಎನ್ನುವುದು ಸಣ್ಣ ಝೂ ಇದ್ದಂತಿದೆ.

ದರ್ಶನ್ ಸ್ವತಃ ಕೃಷಿ ಚಟುವಟಿಕೆಯನ್ನೂ ಮಾಡುತ್ತಾರೆ. ದರ್ಶನ್ ಸ್ವತಃ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿರುವುದು ಖುಷಿಯ ವಿಚಾರ.ದೊಡ್ಡದೊಡ್ಡ ಕೆಲ ಸೂಪರ್ ಸ್ಟಾರ್‍ಗಳು ಸಂಭಾವನೆ ಪಡೆದು ದೊಡ್ಡದೊಡ್ಡ ಕಂಪೆನಿ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ. ಆದರೆ ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿರುವುದು ದರ್ಶನ್ ಅವರಲ್ಲಿರುವ ಕೃಷಿ ಉತ್ಸಾಹ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.

 

NEWSDESK

TIMES OF BENGALURU