ಸಾಹುಕಾರ್ ವಿರುದ್ಧ ಮತ್ತೊಂದು ದೂರು ದಾಖಲು

ಬೆಂಗಳೂರು : ಕೆಲಸದ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಒಂದೆಡೆಯಾದರೆ ಸಚಿವ ಸ್ಥಾನ ಕಳೆದುಕೊಂಡಿರುವಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಕನ್ನಡ ರಕ್ಷಣಾ ವೇದಿಕೆ ಹಾಗೂ ವಕೀಲರು ನೀಡಿದ್ದಂತ ಎರಡು ದೂರನ್ನು ಆಧರಿಸಿ, ರಾಜ್ಯ ಮಹಿಳಾ ಆಯೋಗವು ರಮೇಶ್ ಜಾರಕಿಹೊಳಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ.

ಈ ಕುರಿತಂತೆ ಮಾಹಿತಿ ನೀಡಿದಂತ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು, ಕನ್ನಡ ರಕ್ಷಣಾ ವೇದಿಕೆ ಹಾಗೂ ವಕೀಲರೊಬ್ಬರು ಸಂತ್ರಸ್ತೆಯನ್ನು ಕರೆದು ಹೇಳಿಕೆ ಪಡೆಯುವಂತೆ ದೂರು ನೀಡಿದ್ದಾರೆ. ಇದರಿಂದಾಗಿ ಸಂತ್ರಸ್ತೆಯನ್ನು ಕರೆದು ಹೇಳಿಕೆ ಪಡೆಯುತ್ತೇವೆ. ಪೆÇಲೀಸ್ ತನಿಖೆಯೂ ನಡೆಯಲಿ, ನಾವು ಪೆÇಲೀಸರಿಗೆ ಸಹಕರಿಸುತ್ತೇವೆ. ಸಂತ್ರಸ್ತೆ ಯಾವುದೇ ಭಯಪಡುವ ಅವಶ್ಯಕತೆ ಇಲ್ಲ. ಅವರ ಪರವಾಗಿ ರಾಜ್ಯ ಮಹಿಳಾ ಆಯೋಗವಿದೆ ಎಂಬುದಾಗಿ ತಿಳಿಸಿದರು.

 

NEWS DESK

TIMES OF BENGALURU