ಬೆಂಗಳೂರಿನಲ್ಲಿ 3ನೇ ಹಂತದ ಲಸಿಕೆ ವಿತರಣೆ

ಬೆಂಗಳೂರು : ಮೂರನೇ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಬಿಬಿಎಂಪಿ ವೈದ್ಯಾಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡು ಯಾವುದೇ ರೀತಿಯ ಅನಾಹುತಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕೆಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕರೆ ನೀಡಿದ್ದಾರೆ.

ಕೊರೊನಾ ನಿವಾರಣೆ ಕುರಿತಂತೆ ಖಾಸಗಿ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ಮತ್ತು ಬಿಬಿಎಂಪಿ ವೈದ್ಯಾಕಾರಿಗಳಿಗೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ನಗರದಲ್ಲಿ 107 ಖಾಸಗಿ ಆಸ್ಪತ್ರೆಗಳು, 141 ಖಾಸಗಿ ಆರೋಗ್ಯ ಕೇಂದ್ರಗಳು, 26 ಹೆರಿಗೆ ಆಸ್ಪತ್ರೆ ಹಾಗೂ 6 ರೆಫರಲ್ ಆಸ್ಪತ್ರೆಗಳಲ್ಲಿ ಸೋಮವಾರದಿಂದ ಮೂರನೇ ಹಂತದ ಲಸಿಕಾ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಈಗಾಗಲೇ ಕೊರೊನಾ ಲಸಿಕೆ ನೀಡುವ ಆಸ್ಪತ್ರೆಗಳ ಪ್ರವೇಶದ್ವಾರದಲ್ಲಿ ಕಡ್ಡಾಯವಾಗಿ ಸೈನ್‍ಬೋರ್ಡ್ ಅಳವಡಿಸಬೇಕು, ಲಸಿಕೆ ವಿತರಿಸುವ ಕಿಟ್, ಅಬ್ಜರ್‍ವೇಶನ್ ಘಟಕಗಳನ್ನು ಸಿದ್ದಪಡಿಸಿಕೊಳ್ಳಬೇಕು. ಮೂರನೆ ಹಂತದ ಲಸಿಕೆಯನ್ನು ಆನ್‍ಲೈನ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

 

NEWS DESK

TIMES OF BENGALORE