ಬೆಂಗಳೂರಿನಲ್ಲಿ ಹೆಚ್ಚಾದ ಕೊರೊನಾ ವೇಗ..!

ಬೆಂಗಳೂರು : ರೂಪಾಂತರಿ ಕೊರೊನಾ ಸೋಂಕು ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅತಿ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ) ಸಮೀಕ್ಷೆಯಲ್ಲಿ ತಿಳಿಸಿದೆ. ರೂಪಾಂತರಿ ಸಾರ್ಸ್ ಕೋವಿಡ್-2 ರೂಪಾಂತರಗಳು ಎಷ್ಟು ಆಗಿದೆ ಎಂದು ಇನ್ನೂ ತಿಳಿದುಬಂದಿಲ್ಲ.

ಅಧ್ಯಯನದ ನೇತೃತ್ವ ವಹಿಸಿದ್ದ ಐಐಎಸ್‍ಸಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಉತ್ಪಾಲ್ ಟಾಟು, ಮಾತನಾಡಿ, ರೂಪಾಂತರಿ ಸ್ಥಿರವಾದಾಗ ಮಾತ್ರ ಆ ಸ್ಥಿರ ರೂಪಾಂತರಿಯ ಪರಿಣಾಮ ಬೆಳಕಿಗೆ ಬರುತ್ತದೆ ಎನ್ನುತ್ತಾರೆ. ಕೋವಿಡ್ ಐಸೊಲೇಟ್ ವೈರಲ್ ಜೀನೋಮ್‍ಗಳಲ್ಲಿ 27 ರೂಪಾಂತರಗಳನ್ನು ಹೊಂದಿದ್ದು, ಪ್ರತಿ ಸ್ಯಾಂಪಲ್‍ಗೆ 11 ಕ್ಕೂ ಹೆಚ್ಚು ರೂಪಾಂತರಗಳಿವೆ. ಇದು ರಾಷ್ಟ್ರೀಯ ಸರಾಸರಿ ಶೇ. 8.4 ಮತ್ತು ಜಾಗತಿಕ ಸರಾಸರಿ ಶೇಕಡಾ 7.3 ಎರಡಕ್ಕಿಂತ ಹೆಚ್ಚಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 

NEWS DESK

TIMES OF BENGALURU