ಕೋರ್ಟ್ ಮೊರೆ ಹೋದ 6 ಸಚಿವರು..?

ಬೆಂಗಳೂರು: ತಮ್ಮ ಸ್ನೇಹಿತ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹೊರಬಂದ ನಂತರ ಆತಂಕಕ್ಕೀಡಾಗಿರುವ ಬಾಂಬೆ ಫ್ರೆಂಡ್ಸ್ ಖ್ಯಾತಿಯ 6 ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ಇಂದು ಮತ್ತೆ 6 ಜನ ಸಚಿವರು ಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಯಾವುದೇ ಭೀತಿಯಿಂದ ಕೋರ್ಟ್ ಮೊರೆ ಹೋಗಿಲ್ಲ. ರಾಜಕೀಯ ಷಡ್ಯಂತ್ರಕ್ಕೆ ನಾವು ಟಾರ್ಗೆಟ್ ಆಗಬಾರದು. 2-3 ನಿಮಿಷಗಳಲ್ಲಿ ತೇಜೋವಧೆ ಮಾಡಿದರೆ ಹೇಗೆ.? ಇಂತಹ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು. ಹೀಗಾಗಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದೇವೆ. ಇಂದು ಮತ್ತೆ 6 ಸಚಿವರು ಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದರು.

 

NEWS DESK

TIMES OF BENGALURU