ಬೆಂಗಳೂರು : ಮಾರ್ಚ್ 1ರಿಂದ ಎರಡನೇ ಹಂತದ ಕೊರೋನಾ ಲಸಿಕಾ ಅಭಿಯಾನದಲ್ಲಿ ಸಾರ್ವಜನಿಕರಿಗೂ ಕೊರೋನಾ ಲಸಿಕೆ ವಿತರಣೆ ಆರಂಭಗೊಂಡಿದೆ. ಈಗಾಗಲೇ ಅನೇಕ ರಾಜಕೀಯ ಮುಖಂಡರು ಕೊರೋನಾ ಲಸಿಕೆ ಪಡೆದಿದ್ದಾರೆ. ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಅವರು ಕೊರೋನಾ ಲಸಿಕೆ ಪಡೆದರು.
ನಗರ ಮಲ್ಲೇಶ್ವರ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಭೇಟಿ ನೀಡಿದಂತ ಅವರು, ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯನ್ನು ಪಡೆದರು. ಈ ಮೂಲಕ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಕೂಡ ಕೊರೋನಾ ಲಸಿಕೆಯನ್ನು ಪಡೆದಿದ್ದಾರೆ.
NEWS DESK
TIMES OF BENGALURU