ರಾಸಲೀಲೆ ವಿಡಿಯೋ ಹಿಂದೆ ರಾಜಕೀಯ ಷಡ್ಯಂತ್ರವಿದೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿ ಹೋಳಿ ವಿರುದ್ಧ ರಾಸಲೀಲೆ ವಿಡಿಯೋ ಪ್ರಕರಣದ ಹಿಂದೆ ಕನಕಪುರ ಮತ್ತು ಬೆಳಗಾವಿ ಕಡೆಯವರು ಇದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

ನಗರದ ಅರಣ್ಯ ಭವನದಲ್ಲಿರುವ ಮಾಧ್ಯಮದ ಜೊತೆ ಮಾತನಾಡಿದ ಅವರು, ಕನಕಪುರ, ಬೆಳಗಾವಿಯವ್ರೇ ವಿಡಿಯೋ ಬರಲು ಕಾರಣ. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಡ್ಯಂತ್ರ ಇದೆ. ಮುಂದಿನ ದಿನಗಳಲ್ಲಿ ಅವರು ಅನುಭವಿಸ್ತಾರೆ. ಆರು ಜನ ಸಚಿವರು ಕೋರ್ಟ್‍ಗೆ ಹೋಗಿದ್ಯಾಕೆ ಅಂತ ಗೊತ್ತಿಲ್ಲ, ಆ ಸಚಿವರನ್ನೇ ನೀವು ಕೇಳಬೇಕು ಎಂದು ಹೇಳಿದ್ದಾರೆ.

 

NEWS DESK

TIMES OF BENGALURU