ನಾನು ಬ್ಲಾಕ್ಮೇಲ್ ಮಾಡುವ ರಾಜಕಾರಣಿಯಲ್ಲ

ಬೆಂಗಳೂರು: ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪನವರ ಎಲ್ಲಾ ಹಗರಣಗಳ ಬಗ್ಗೆ ನನಗೆ ಗೊತ್ತಿದೆ. ಮುಂದಿನ ಎಲ್ಲಾ ಹಗರಣ ಬಯಲು ಮಾಡುತ್ತೇನೆ ಎಂದು ಭದ್ರಾವತಿ ಶಾಸಕ ಸಂಗಮೇಶ್ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಲ್ಲೇ ಅವರ ಹಗರಣ ಬಯಲು ಮಾಡುತ್ತೇನೆ. ಹಿಂದೆ ಎಷ್ಟು ಆಸ್ತಿಯಿತ್ತು, ಈಗ ಎಷ್ಟು ಆಸ್ತಿಯಿದೆ ಎನ್ನುವುದರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.ನಾನು ಬ್ಲಾಕ್ಮೇಲ್ ಮಾಡುವ ರಾಜಕಾರಣಿಯಲ್ಲ. ಹಿಂದೆ ಎಷ್ಟು ಆಸ್ತಿಯಿತ್ತು? ಈಗ ಎಷ್ಟು ಆಸ್ತಿಯಿದೆ? ಎಂಬುದೆಲ್ಲವನ್ನೂ ನಾನು ಬಯಲು ಮಾಡುತ್ತೇನೆ. ಇನ್ನೂ ಮೂರು ತಿಂಗಳಷ್ಟೇ ಈ ಸರ್ಕಾರದ ಆಯಸ್ಸು ಎಂದು ಭವಿಷ್ಯ ನುಡಿದರು.

 

NEWS DESK

TIMES OF BENGALURU